ಶಿವಮೊಗ್ಗ ಮಹಾನಗರಪಾಲಿಕೆ, ಶಿವಮೊಗ್ಗ

   ಶಿವಮೊಗ್ಗ ನಗರ ಆಶ್ರಯ ಸಮಿತಿ

ಶಿವಮೊಗ್ಗ ನಗರದ ಗೋವಿಂದಾಪುರ ಹಾಗೂ ಗೋಪಿಶೆಟ್ಟಿಕೊಪ್ಪ ಗ್ರಾಮಗಳಲ್ಲಿ ಜಿ+2 ಮಾದರಿಯ ಮನೆಗಳನ್ನು ಶಿವಮೊಗ್ಗ ನಗರದ ನಿವೇಶನ ರಹಿತರಿಗೆ ಹಂಚುವ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಆನ್-ಲೈನ್ (Online) ಮೂಲಕ ಅರ್ಜಿಗಳಿಗೆ ಆಹ್ವಾನ.    2017-18 ನೇ ಸಾಲಿನ ಅರ್ಹ ಮತ್ತು ಅನರ್ಹ ನಿವೇಶನ ರಹಿತರ ಪಟ್ಟಿ     Publication for the objections if any

ಅರ್ಜಿಗಳನ್ನು ಆನ್-ಲೈನ್ (Online) ಮೂಲಕ ಸಲ್ಲಿಸಲು ಪ್ರಾರಂಭ ದಿನಾಂಕ:

03-10-2023

ಅರ್ಜಿಗಳನ್ನು ಆನ್-ಲೈನ್ (Online) ಮೂಲಕ ಸಲ್ಲಿಸಲು ಕೊನೆಯ ದಿನಾಂಕ:

31-12-2023

ಬ್ಯಾಂಕ್ ಮೂಲಕ ನಿಗಧಿತ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ:

07-01-2024

 

ಅರ್ಜಿದಾರರು ಆನ್-ಲೈನ್ ನಲ್ಲಿ ಅರ್ಜಿ ಸಲ್ಲಿಸುವ ಮುಂಚಿತವಾಗಿ ಅಧಿಸೂಚನೆ ಮತ್ತು ನಿಯಮಗಳನ್ನು ಕಡ್ಡಾಯವಾಗಿ ಓದಿಕೊಳ್ಳತಕ್ಕದ್ದು

  •   ಅರ್ಜಿ ಶುಲ್ಕ -

ಜಾತಿ

ಅರ್ಜಿ ಶುಲ್ಕ .ಎಂ.ಡಿ (ಫಲಾನುಭವಿಗಳ ವಂತಿಕೆ ಹಣದ ಶೇಕಡಾ 10%) ಒಟ್ಟು
ಸಾಮಾನ್ಯ, ಪ್ರವರ್ಗ-1, ಪ್ರವರ್ಗ 2(), 2(ಬಿ), 3(), 3(ಬಿ)ಗೆ ಸೇರಿದ ಅರ್ಜಿದಾರರಿಗೆ ರೂ. 200/- ರೂ. 8000/- ರೂ. 8200/-
ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಕ್ಕೆ ಸೇರಿದ ಅರ್ಜಿದಾರರಿಗೆ ರೂ. 100/- ರೂ. 5000/- ರೂ. 5100/-

 

ಅರ್ಜಿದಾರರು ಆನ್-ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ಮಾತ್ರಕ್ಕೆ ಅರ್ಜಿ ಪ್ರಕ್ರಿಯೆ ಪೂರ್ಣಗೊಳ್ಳುವುದಿಲ್ಲ ಅರ್ಜಿದಾರರು ಆನ್-ಲೈನ್ ನಲ್ಲಿ ಅರ್ಜಿ ಸಲ್ಲಿಸಿದ ನಂತರ ಕಂಪ್ಯೂಟರ್ ಜನರೇಟೆಡ್ ಚಲನ್ ನೊಂದಿಗೆ ಅಧಿಸೂಚನೆಯಲ್ಲಿ ಸೂಚಿಸಿರುವ ಬ್ಯಾಂಕ್ ಗಳಲ್ಲಿ (ಭಾನುವಾರ, ಸರ್ಕಾರಿ ರಜೆ ಹಾಗೂ ಬ್ಯಾಂಕಿನ ರಜೆಯನ್ನು ಹೊರತುಪಡಿಸಿ)/ಶಿವಮೊಗ್ಗ ಒನ್ ಕೇಂದ್ರಗಳಲ್ಲಿ (ಎಲ್ಲಾ ದಿನಗಳಲ್ಲೂ) ನಗದನ್ನು ಪಾವತಿಸಿ ಸ್ವೀಕೃತಿ/ರಶೀದಿಯನ್ನು ಹಣ ಪಾವತಿಸಿದ ಬ್ಯಾಂಕ್/ಶಿವಮೊಗ್ಗ ಒನ್ ಕೇಂದ್ರಗಳಲ್ಲಿ ಪಡೆದ ನಂತರವಷ್ಟೆ ತಮ್ಮ ಅರ್ಜಿ ಪ್ರಕ್ರಿಯೆ ಪೂರ್ಣಗೊಳ್ಳುವುದು.

 

ಅರ್ಜಿ ಸಲ್ಲಿಸಲು ಇರಬೇಕಾದ ಅರ್ಹತೆಗಳು

ಅರ್ಜಿದಾರರು ಹೊಂದಿರಬೇಕಾದ  ದಾಖಲೆಗಳು

1.    18 ವರ್ಷ ಮೇಲ್ಪಟ್ಟ ಮಹಿಳಾ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದಾಗಿದೆ. (ಪುರುಷ ಅಭ್ಯರ್ಥಿಯಾಗಿದ್ದಲ್ಲಿ, ಮಾಜಿ ಸೈನಿಕ, ವಿಕಲಚೇತನ, ಸ್ವತಂತ್ರ ಯೋಧರು, ವಿಧುರ ಹಾಗೂ ಹಿರಿಯ ನಾಗರೀಕ ಅಭ್ಯರ್ಥಿಯಾಗಿರಬೇಕು).

2.   ಅರ್ಜಿದಾರರು ಶಿವಮೊಗ್ಗ ನಗರ ಪ್ರದೇಶದಲ್ಲಿ ವಾಸವಾಗಿರಬೇಕು.

3.   ಅರ್ಜಿದಾರರು ಬಿ.ಪಿ.ಎಲ್/ಅಂತ್ಯೋದಯ ಪಡಿತರ ಚೀಟಿಯನ್ನು ಹೊಂದಿರಬೇಕು.

4.   ಅರ್ಜಿದಾರರು ಮತ್ತು ಅವರ ಕುಟುಂಬದವರು ಸ್ವಂತ ನಿವೇಶನ/ಮನೆಯನ್ನು ಹೊಂದಿರಬಾರದು.

5.   ಅರ್ಜಿದಾರರು ಬೇರೆ ಯಾವುದೇ ಯೋಜನೆಯಡಿಯಲ್ಲಿ ನಿವೇಶನ/ವಸತಿ ಸೌಲಭ್ಯವನ್ನು ಪಡೆದಿರಬಾರದು.

6.   ತೃತಿೇಯ ಲಿಂಗಿಗಳು (Transgender) ಸಹ ಅರ್ಜಿಯನ್ನುಸಲ್ಲಿಸಬಹುದಾಗಿದೆ.

1.    ಅರ್ಜಿದಾರರ ಇತ್ತೀಚಿನ 01 ಕಲರ್ ಪಾಸ್ ಪೋರ್ಟ್ ಸೈಜಿನ ಭಾವಚಿತ್ರ.

2.   ಆಧಾರ್ ಕಾರ್ಡ್.

3.   ಬಿ.ಪಿ.ಎಲ್ ಪಡಿತರ ಚೀಟಿ.

4.   ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ / ವಿಕಲಚೇತನ / ಹಿರಿಯ ನಾಗರೀಕರು / ಮಾಜಿ ಸೈನಿಕ / ಸೈನಿಕರ ವಿಧವೆಯರು / ಸ್ವತಂತ್ರ ಯೋಧರು / ವಿಧುರರು / ಸಕ್ಷಮ ಪ್ರಾಧಿಕಾರದಿಂದ  ಪಡೆದಂತಹ ಪ್ರಮಾಣ ಪತ್ರವನ್ನು ಹೊಂದಿರಬೇಕು.

5. ಅರ್ಜಿದಾರರ ಹೆಸರಿನಲ್ಲಿ ಚಾಲ್ತಿಯಲ್ಲಿರುವ ಬ್ಯಾಂಕಿನ ಪಾಸ್ ಪುಸ್ತಕ.

6. ಆದಾಯ ಪ್ರಮಾಣಪತ್ರ (ರೂ.86700/- ಒಳಗೆ ಇರಬೇಕು) .

 

ಮೇಲೆ ತಿಳಿಸಿದ ಎಲ್ಲಾ ಮೂಲ ದಾಖಲಾತಿಗಳು ಹಾಗೂ ದಾಖಲಾತಿಗಳ ಸಂಖ್ಯೆಗಳನ್ನು ಆನ್ ಲೈನ್ (Online)ನಲ್ಲಿ ಅರ್ಜಿ ಸಲ್ಲಿಸುವ ಸಮಯದಲ್ಲಿ  ಮೂಲ ದಾಖಲೆಯಲ್ಲಿರುವಂತೆ ಮಾಹಿತಿಯನ್ನು ಸ್ಪಷ್ಟವಾಗಿ ಸಲ್ಲಿಸುವುದು.ಅಪೂರ್ಣ ವಿವರ ನೀಡಿದಲ್ಲಿ ಅಥವಾ ತಪ್ಪು ಮಾಹಿತಿಯನ್ನು ನೀಡಿದ್ದಲ್ಲಿ, ಅರ್ಜಿದಾರರಿಗೆ ಯಾವುದೇ ತಿಳುವಳಿಕೆಯನ್ನು ನೀಡದೇ ಅರ್ಜಿಯನ್ನು ತಿರಸ್ಕರಿಸಲಾಗುವುದು.