Conditions
1. ಮಂಜೂರು ನಕಾಶೆಯಲ್ಲಿ ಸೂಚಿಸಿದಂತೆ ಮನೆಯ ಕೊಳವೆ ಬಾವಿ/ನಲ್ಲಿಯ ಹೆಚ್ಚುವರಿ ನೀರಿನ ಸಂಪರ್ಕವನ್ನು ಒಳಚರಂಡಿಗೆ ಜೋಡಿಸತಕ್ಕದ್ದು. ಮಳೆ ನೀರು ಒಳಚರಂಡಿಗೆ ಬರದಂತೆ ಕ್ರಮವಹಿಸುವುದು.
2. ಗ್ರಾಹಕರ ಕಾಂಪೌಂಡಿನಲ್ಲಿ ನಿರ್ಮಿಸುವ ಪರಿವೀಕ್ಷಣಾ ಚೇಂಬರ್‍ಗೆ ಜಾಲರಿ ಕಡ್ಡಾಯವಾಗಿ ಅಳವಡಿಸತಕ್ದಕ್ದು. ಆಳು ಗುಂಡಿಗೆ ಹೊಸದಾಗಿ ರಂದ್ರ ಕೊರೆಯಬಾರದು.
3. ನಗರ ಸ್ಥಳೀಯ ಸಂಸ್ಥೆಯ ಆಳು ಗುಂಡಿಗೆ ಸಂಪರ್ಕಪಡಿಸುವ ಕೊಳವೆಯಲ್ಲಿ ಸೋರುವಿಕೆ ಉಂಟಾದಲ್ಲಿ ರಸ್ತೆ ಕಡಿತ ಮೊತ್ತವನ್ನು ಗ್ರಾಹಕರೆ ಭರಿಸಿ ಅನುಮತಿ ಪಡೆದು ದುರಸ್ಥಿಪಡಿಸತಕ್ಕದ್ದು.
4. ರಸ್ತೆ ಭಾಗದಲ್ಲಿ ಯಾವುದೇ ಕಾರಣಕ್ಕೆ ಚೇಂಬರ್ ನಿರ್ಮಿಸಲು ಅವಕಾಶವಿರುವುದಿಲ್ಲ. ಒಂದು ವೇಳೆ ಚೇಂಬರ್ ನಿರ್ಮಿಸಲು ಅಗತ್ಯ ಕಂಡು ಬಂದಲ್ಲಿ ನಗರ ಸ್ಥಳೀಯ ಸಂಸ್ಥೆಯ ಅನುಮತಿ ಪಡೆದು ಚೇಂಬರ್ ಬದಲಿಗೆ ಆಳುಗುಂಡಿ ನಿರ್ಮಿಸತಕ್ಕದ್ದು.
5. ನಗರ ಸ್ಥಳೀಯ ಸಂಸ್ಥೆಯ ಗ್ರಾಮಸಾರ ಕೊಳವೆ ಮಾರ್ಗದ ವ್ಯಾಸಕ್ಕಿಂತ ಹೆಚ್ಚಿನ ವ್ಯಾಸದ ಕೊಳವೆ ಮಾರ್ಗ ಅಳವಡಿಸಿ ಒಳಚರಂಡಿ ಸಂಪರ್ಕ ಕಲ್ಪಿಸಲು ಅವಕಾಶವಿರುವುದಿಲ್ಲ.
6. ಉತ್ತಮ ಗುಣಮಟ್ಟದ ಕೊಳವೆಗಳನ್ನು ಮತ್ತು ಕನಿಷ್ಟ ಆಳಕ್ಕೆ ಅಳವಡಿಸಿ ಸಂಪರ್ಕ ಕಲ್ಪಿಸತಕ್ಕದ್ದು.
7. ಒಳಚರಂಡಿ ವ್ಯವಸ್ಥೆಯ ಅಭಿವೃದ್ದಿ ಯೋಜನೆ ನಡೆಯುತ್ತಿರುವುದರಿಂದ ಈ ಸಂಪರ್ಕವು ಮುಂದೆ ಪರಿಷ್ಕರಣೆಗೊಳ್ಳುವ ಸಂಪರ್ಕ ಶುಲ್ಕ ಮತ್ತು ಮೇಲುಸ್ತುವಾರಿ ಶುಲ್ಕದ ಪರಿಷ್ಕರಣೆಗೆ ಒಳಪಟ್ಟಿರುತ್ತದೆ.
8. ಕಸ ವಿಲೇವಾರಿಯ ನಿಗಧಿತ ಸೇವಾ ಶುಲ್ಕವನ್ನು ಕಡ್ಡಾಯವಾಗಿ ಪಾವತಿಸತಕ್ಕದ್ದು.
9. ರಸ್ತೆಯನ್ನು ತುಂಡರಿಸುವ ಬಗ್ಗೆ ಪ್ರತ್ಯೇಕವಾಗಿ ಪರಿಶೀಲಿಸಿ ಅನುಮತಿ ನೀಡಲಾಗುವುದು.